1
1

ಎಲ್ಲರೊಳಗೊಂದಾಗು ಮಂಕುತಿಮ್ಮದೇಶದ ಕೃಷಿ ಕ್ಷೇತ್ರದ ಸಹಾಯಕ್ಕಾಗಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಹಣಕಾಸಿನ ಸಹಾಯ ಮಾಡುವ ಸಂಸ್ಥೆಯಾಗಿ ನಬಾರ್ಡ್ನ್ನು ಸ್ಥಾಪಿಸಲಾಗಿದ್ದು ರೈತರಿಗೆ ಬೆಳೆ ಸಾಲ ಕೃಷಿ ಅಭೀವೃದ್ದಿ ಸಾಲ ನೀಡಲು ಬ್ಯಾಂಕುಗಳಿಗೆ ಸಾಲÀ ನೀಡುತ್ತಿದೆ. ನಬಾರ್ಡ ಬ್ಯಾಂಕಿನ ಕಾರ್ಯನಿರ್ವಹಣಾ ವಿಭಾಗದ ಮುಖ್ಯ ಅಂಗವಾಗಿ ಸಹಕಾರಿ ಸಂಘಗಳು ಕೂಡಾ ಪ್ರಾಮುಖ್ಯಗಳಿಸಿವೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಖ್ಯವಾಗಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ವಿಕೇಂದ್ರೀಕೃತ ಗೋಡೌನ್ಗಳ ನಿರ್ಮಾಣ, ಪ್ರತಿ ಜಿಲ್ಲೆಗಳಲ್ಲೂ ಹಾಲು ಶೇಖರಣಾ ವ್ಯವಸ್ಥೆ, ಗ್ರಾಮೀಣ ರಸ್ತೆ ಸುಧಾರಣೆ ಮತ್ತು ನಿರ್ಮಾಣಗಳಿಗೆ ಕೂಡಾ ಹಣಕಾಸಿನ ಸಹಾಯ ಮಾಡುತ್ತದೆ.
ಗ್ರಾಮೀಣ ಪ್ರಾಥಮಿಕ ಸಹಕಾರ ಸಂಘಗಳನ್ನು ಲಾಭದಾಯಕವಾಗಿ ನಡೆಸಲು ಪ್ಯಾಕ್ಸ್ ವೇಗೋತ್ಕರ್ಷ ಯೋಜನೆಯಲ್ಲಿ ಸಹಕಾರಿ ಸಂಘಗಳು ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ, ಆಹಾರ ಧಾನ್ಯ ಸಂಸ್ಕರಣಾ ಘಟಕUಳು ಕೃಷಿ ಧಾನ್ಯಗಳ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಸಂಸ್ಕರಣಾ ಘಟಕಗಳನ್ನು ಮಾಡಬಹುದಾಗಿದ್ದು ಇದಕ್ಕಾಗಿ ಕೇವಲ ಶೇಕಡಾ 3% ರ ಬಡ್ಡಿದರದಲ್ಲಿ ಎರಡು ಕೋಟಿ ವರೆಗೆ ಸಾಲ ಸೌಲಭ್ಯ ಜೊತೆಗೆ ಸಹಾಯಧನವನ್ನು ನೀಡುವ ವ್ಯವಸ್ಥೆ ಇದ್ದು ಸಹಕಾರಿ ಸಂಘಗಳು ಇದರ ಪ್ರಯೋಜನ ಪಡೆಯಬೇಕು. ತಮ್ಮ ತಮ್ಮ ಸಂಘಗಳನ್ನು ಲಾಭದಾಯಕತೆಯತ್ತ ಕೊಂಡೊಯ್ಯಬೇಕು ಎಂದು ನಬಾರ್ಡ ಬೀದರಿನ ಜಿಲ್ಲಾ ಅಭಿವೃದ್ದಿ ಪ್ರಬಂಧಕರಾದ ಮಂಜುನಾಥ ರೆಡ್ಡಿಯವರು ನುಡಿದರು.
ಡಿಸಿಸಿ ಬ್ಯಾಂಕಿನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ಬೀದರÀ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗÀಳ ಅಧ್ಯಕ್ಷರಿಗೆ ಮತ್ತು ನಿರ್ದೇಶಕರಿಗೆ ನಬಾರ್ಡ ವತಿಯಿಂದ ನಡೆದ ಆಡಳಿತ ನಿರ್ವಹಣೆ ಮತ್ತು ಸಂಪನ್ಮೂಲ ಕ್ರೋಢೀಕರಣ ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಹಕಾರೀ ಸಂಘಗಳು ಸ್ವತಂತ್ರ ಮತ್ತು ಸ್ವಾಯತ್ತ ಆಡಳಿತ ಮಂಡಳಿಗಳನ್ನು ಹೊಂದಿದ್ದು ಸ್ವಾವಲಂಬಿಗಳಾಗುವತ್ತ ಯೋಜನೆ ರೂಪಿಸಬೇಕು. ಬ್ಯಾಂಕುಗಳ ಮೇಲೆ ಅವಲಂಬಿತರಾಗಿ ಹಿನ್ನಡೆ ಅನುಭವಿಸಬಾರದು ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ಉಪಸ್ಥಿತರಿದ್ದ ಬೀದರ ಜಿಲ್ಲಾ ಸಹಾಯಕ ನಿಬಂಧಕರಾದ ಡಾ ನೀಲಾಂಬಿಕ ಅವರು ಮಾತನಾಡುತ್ತಾ ಸಹಕಾರೀ ಸಂಘಗಳ ನಿರ್ದೇಶಕ ಮಂಡಳಿಯವರು ತಮ್ಮ ಸಂಘಗ¼ ಸಭೆಗಳಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಬೇಕು. ಸಂಘದ ಅಭಿವೃದ್ದಿ ಪರ ನಿರ್ಣಯಗಳನ್ನು ಬೆಂಬಲಿಸಬೇಕು. ಇತ್ತೀಚ್ಚೀನ ಸಹಕಾರೀ ಕಾಯದೆ ತಿದ್ದುಪಡಿಗಳ ಪ್ರಕಾರ ಎಲ್ಲಾ ನಿರ್ದೇಶಕ ಮಂಡಳಿಯವರು ಪ್ರತೀ ವರ್ಷ ತಮ್ಮ ಆಸ್ತಿ ಘೋಷಣೆಯನ್ನು ಸರಕಾರಕ್ಕೆ ಸಲ್ಲಿಸಬೇಕು. ಇದರಿಂದ ಅವರು ಸಂಘಕ್ಕೆ ಮಾತ್ರವಲ್ಲ ಸಮಾಜಕ್ಕೂ ಹೊಣೆಗಾರರಾಗಿರುತ್ತಾರೆ. ಸಂಘÀದ ಲೆಕ್ಕ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಪ್ರತೀ ವರ್ಷ ಆಡಿಟ ಮಾಡಿಸಬೇಕು ಇದಕ್ಕೆ ತಪ್ಪದ್ದಲ್ಲಿ ನಿರ್ದೇಶಕ ಸ್ಥಾನ ಕಳಕೊಳ್ಳಬೇಕಾಗುತ್ತದೆ. ssಸಂಘದಲ್ಲಿ ಸಾಲ ನೀಡುವಾಗ ಸ್ವಜನ ಪಕ್ಷಪಾತ ಮಾಡಬಾರದು ಸಾಲ ವಸೂಲಾಗದಿದ್ದರೆ ಅಥವಾ ಅಕ್ರಮವಾಗಿ ಸಾಲ ಮಂಜೂರಿ ಮಾಡಿದರೆ ನಿರ್ದೆಶಕರೇ ಜವಾಬ್ದಾರಿಯಾಗುತ್ತಾರೆ ಎಂದು ಎಚ್ಚರಿಸಿದರು.
ಸಮಾರಂಭದಲ್ಲಿ ದಾವಣಗೆರೆ, ಹಳಿಯಾಳ ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳ ಸಂಘಗಳ ಅಧ್ಯಕ್ಷರು ಬಾಗವಹಿಸಿದ್ದರು. ಸಹಾರ್ದ ನಿರ್ದೇಶಕ ಬಿ ಸುಬ್ರಹ್ಮಣ್ಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಹಕಾರಿ ರಂಗದಲ್ಲಿ ಇಂದು ನುರಿತ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದು ಸಂಸ್ಥೆಗಳ ಅಭಿವೃದ್ದಿಗೆ ಕಾರಣವಾಗುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕೆಲಸವನ್ನು ಆಡಳಿತ ಮಂಡಳಿ ಸದಸ್ಯರು ಮಾಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ ಮಂಜುನಾಥ ಭಾಗವತ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.
ಸಹಾರ್ದ ತರಬೇತಿ ಸಂಸ್ಥೆಯ ಉಪನ್ಯಾಸಕ ಎಸ ಜಿ ಪಾಟೀಲ ಸ್ವಾಗತಿಸಿ ವಂದಿಸಿದರು. ಅನಿಲ ಪಿ ಮತ್ತು ಮಹಾಲಿಂಗಪ್ಪಾ ಕಾರ್ಯಕ್ರಮ ನಿರ್ವಹಿಸಿದರು.
Subscribe to get the latest posts sent to your email.