Popular Posts

50ನೇ ದಿನದ ಸಂಭ್ರಮಾಚರಣೆ|| 100 ದಿನದತ್ತ ಮುನ್ನಡೆಯುತ್ತಿರುವ ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ

KALIYUGAD KOOGU
ಭಾಲ್ಕಿ: ಪಟ್ಟಣದ ಸಂಗಮೇಶ್ವರ ಚಿತ್ರಮಂದಿರದಲ್ಲಿ ನಟ,ನಿರ್ದೇಶಕ ವಿಷ್ಣುಕಾಂತ.ಬಿ.ಜೆ ನೇತೃತ್ವದಲ್ಲಿ ಶನಿವಾರ ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರದ 50ನೇ ದಿನದ ಸಂಭ್ರಮಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರ ನಟ, ನಿರ್ದೇಶಕ ವಿಷ್ಣುಕಾಂತ.ಬಿ.ಜೆ, ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರವು ಬೀದರ ಜಿಲ್ಲೆಯ ಸಪ್ನಾ ಮಲ್ಟಿಪ್ಲೆಕ್ಸ್ ಮತ್ತು ಭಾಲ್ಕಿಯ ಸಂಗಮೇಶ ಚಿತ್ರಮಂದಿರದಲ್ಲಿ ಸತತ 50 ದಿನಗಳ ಯಶಸ್ವಿ ಪ್ರದರ್ಶನಕಂಡು 100ನೇ ದಿನದತ್ತ ದಾಪುಗಾಲು ಹಾಕುತ್ತಲಿದೆ. ಚಲನಚಿತ್ರದಲ್ಲಿ ಅಧ್ಯಾತ್ಮಿಕ ವಚನ ಸಂಗೀತದೊಂದಿಗೆ ನೋಡುಗರಿಗೆ ಮನರಂಜೆ ಮತ್ತು ಹಾಸ್ಯ ಚಟಾಕಿಗಳೂ ಇರುವುದರಿಂದ ಎಲ್ಲರೂ ಮೆಚ್ಚುವಂತಾಗಿದೆ. ಕೈಯಲ್ಲಿಯೇ ಮನರಂಜನೆಯ ಆಟಿಕೆಗಳು ಇರುವ ಸಂದರ್ಭದಲ್ಲಿ, ಚಿತ್ರ ಮಂದಿರಕ್ಕೆ ಬಂದು ಚಲನ ಚಿತ್ರ ನೋಡುಗರ ಸಂಖೆ ಸಾಕಷ್ಟು ಕಮ್ಮಿಯಾಗಿದೆ. ಇಂತಹ ಸಂದರ್ಭದಲ್ಲಯೂ ಎಲ್ಲರೂ ಚಿತ್ರಮಂದಿರಕ್ಕೆ ಆಗಮಿಸಿ ಚಲನಚಿತ್ರ ನೋಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಿದ್ಯಾಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ ಹುಲಸೂರೆ ಮಾತನಾಡಿ, ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರವು ವಚನ ಸಂಗೀತದ ಸರಮಾಲೆಯಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಚಲನ ಚಿತ್ರವಾಗಿದೆ ಹೀಗಾಗಿ ನಮ್ಮ ವಿದ್ಯಾ ಸಂಸ್ಥೆಯ ಎಲ್ಲಾ ಮಕ್ಕಳಿಗೆ ಚಲನ ಚಿತ್ರ ನೋಡಿಸಲಾಗುತ್ತಿದೆ ಎಂದು ಹೇಳಿದರು. ಬುದ್ಧಪ್ರಿಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತಿಪ್ಪಣ್ಣಾ ಶಿವಪೂರೆ ಮಾತನಾಡಿ, ಜಗನ್ಮಾತೆ ಅಕ್ಕಮಹಾದೇವಿ ಚಲನ ಚಿತ್ರವು ಮನೆಮಂದಿ ಕುಳಿತು ನೋಡುವ ಚಲನ ಚಿತ್ರವಾಗಿದೆ. ನಮ್ಮ ಭಾಗದಲ್ಲಿಯೇ ಹೆಚ್ಚಾಗಿ ಚಿತ್ರೀಕರಿಸಲಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಈ ಚಿತ್ರ ನೋಡಿ ಆನಂದ ಪಡಬೇಕು ಎಂದು ಹೇಳಿದರು. ಇದೇವೇಳೆ ಚಲನ ಚಿತ್ರ ಯಶಸ್ವಿ ಪ್ರದರ್ಶನಕ್ಕೆ ಸಹಕಾರ ನೀಡಿದ ಮಹನೀಯರಿಗೆ ನಟ, ನಿರ್ದೇಶಕ ವಿಷ್ಣುಕಾಂತ.ಬಿ.ಜೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಿತ್ರಮಂದಿರ ವ್ಯವಸ್ಥಾಪಕ ಚಾಂದ್‍ಸಾಬ್ ಪಟೇಲ, ಚಿತ್ರನಟಿ ಗೌರಿ ವಿಷ್ಣುಕಾಂತ, ಜೈದೀಪ ಶೇರಿಕಾರ, ಜೈಹಿಂದ್ ಮಾಸ್ತರ್, ಕಮಲಾಕರ ಬರ್ಮಾ ಉಪಸ್ಥಿತರಿದ್ದರು.ಗಣಪತಿ ಬೋಚರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು. ಜೈರಾಜ ನಾವದಗಿ ವಂದಿಸಿದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading

Subscribe