Popular Posts

ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ ಕರಡು ಮತದಾರರ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18.49 ಲಕ್ಷ ಮತದಾರರು -ಇಕ್ರಂ ಶರೀಫ್

ಕಲಬುರಗಿ,ಅ.24 ಭಾರತ ಚುನಾವಣಾ ಆಯೋಗದ ನಿರ್ದೇಶನುಸಾರ ವಿಶೇಷ ಸಂಕ್ಷಿಪ್ತ ಮತದಾರರ ಪರಿಷ್ಕರಣೆ-2026ರ ಕರಡು ಮತದಾರರ ಪಟ್ಟಿ ಸೋಮವಾರ ಪ್ರಕಟಿಸಲಾಗಿದ್ದು, ಜಿಲ್ಲೆಯಾದ್ಯಂತ 9,40,251 ಪುರುಷ, 9,09,121 ಮಹಿಳೆ ಹಾಗೂ 213 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 18,49,585 ಜನ ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಇದರಲ್ಲಿ 18-19 ವರ್ಷ ವಯಸ್ಸಿನ 14,125 ಮತ್ತು 24,817 ವಿಶೇಷಚೇತನರು ಮತದಾರರಿದ್ದಾರೆ. ಜನಸಂಖ್ಯೆವಾರು ನೋಡಿದಾಗ ಶೇ.56.14 ಮಯದಾರರ ಪ್ರಮಾಣವಿದ್ದು, ಪ್ರತಿ 1,000 ಪುರುಷರಿಗೆ 967 ಮಹಿಳಾ ಮತದಾರರು ಪಟ್ಟಿಯಲ್ಲಿದ್ದಾರೆ. ಎಸ್.ಐ.ಆರ್. ಪಕ್ರಿಯೆ ಆರಂಭಕ್ಕು ಮುನ್ನ ಜಿಲ್ಲೆಯಲ್ಲಿ ಒಟ್ಟು 23,71,542 ಮತದಾರರಿದ್ದು, ಇದೀಗ ಎಸ್.ಐ.ಆರ್. ಪ್ರಕ್ರಿಯೆ ನಂತರದ ಕರಡು ಪಟ್ಟಿಯಲ್ಲಿ 18,49,585 (ಶೇ.77.99) ಜನ ಮತದಾರರು ಮಾತ್ರ ನೊಂದಾಯಿತರಾಗಿದ್ದಾರೆ. ಪರಿಷ್ಕರಣೆಯಲ್ಲಿ 71,691 ಜನ ಮತದಾರರು ನಿಧನ, 47,445 ಮತದಾರರು ಮನೆಯಲ್ಲಿ ಇಲ್ಲದಿರುವ (ಗೈರು), 3,47,606 ಮತದಾರರು ಶಾಶ್ವತವಾಗಿ ಸ್ಥಳಾಂತರ, ಇತರೆ 21,816 ಹಾಗೂ 33,399 ಮತದಾರರು ಈಗಾಗಲೆ ನೋಂದಣಿಯಾಗಿದ್ದರಿಂದ ಹೀಗೆ ಒಟ್ಟು 5,21,957 (ಶೇ.22) ಮತದಾರರನ್ನು ಎ.ಎಸ್.ಡಿ.ಡಿ.ಓ ಎಂದು ಗುರುತಿಸಿದ್ದು, ಮತಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎಸ್.ಐ.ಆರ್ ಪ್ರಕಿಯೆ ಕಳೆದ ಜೂನ್ 30 ರಿಂದ ಆಗಸ್ಟ್ 17ರ ವರೆಗೆ ಬಿ.ಎಲ್.ಓ. ಗಳು ಮನೆ ಮನೆಗೆ ಹೋಗಿ ಗಣತಿ ನಮೂನೆ ನೀಡಿ ಮತದಾರರಿಂದ ಮರಳಿ ಪಡೆದು ಗಣಕೀಕರಣ ಮಾಡಿದ ನಂತರ ಈ ಅಂಕಿ-ಸಂಖ್ಯೆಗಳು ಹೊರಬಿದ್ದಿವೆ. ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿ, ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಇದಲ್ಲದೆ ಪಟ್ಟಿಯನ್ನು hಣಣಠಿs://voಣeಡಿs.eಛಿi.gov.iಟಿ/ಜoತಿಟಿಟoಚಿಜ-eಡಿoಟಟ?sಣಚಿಣeಅoಜe=S10 ನಲ್ಲಿಯೂ ಪ್ರಚೂರಪಡಿಸಲಾಗಿದೆ ಎಂದರು.
ಪ್ರಕಟಿತ ಕರಡು ಪಟ್ಟಿ ಸಾರ್ವಜನಿಕರು ವೀಕ್ಷಿಸಿ ಅಕ್ಷೇಪಣೆಗಳಿದಲ್ಲಿ ಸೆಪ್ಟೆಂಬರ್ 23 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಸ್ವೀಕೃತ ಆಕ್ಷೇಪಣೆಗಳನ್ನು ಅಕ್ಟೋಬರ್ 22 ರೊಳಗೆ ವಿಲೇವಾರಿ ಮಾಡಿ ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿ.ಸಿ. ಇಕ್ರಮ ಶರೀಫ್ ಸ್ಪಷ್ಟಪಡಿಸಿದರು.
1,05 ಲಕ್ಷ ಮತದಾರರಿಗೆ ನೋಟಿಸ್, ಮತಗಟ್ಟೆ ಹಂತದಲ್ಲಿಯೇ ವಿಚಾರಣೆ: ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಹೆಸರಿದ್ದು 2002ರ ಎಸ್.ಐ.ಆರ್. ಪಟ್ಟಿಯ ಮಾಹಿತಿ ನೀಡದ 53,788 ಜನ ಮತದಾರರನ್ನು ನೋ ಮ್ಯಾಪಿಂಗ್ ಮತ್ತು 2002ರ ಎಸ್.ಐ.ಆರ್. ಪಟ್ಟಿಯ ದಾಖಲೆಗೆ ತಾಳೆಯಾಗದ 51,705 ಜನ ಮತದಾರರನ್ನು ಅನೋಮಲೀಸ್ ಎಂದು ಪರಿಗಣಿಸಿದ್ದು, ಇಂತಹ ಒಟ್ಟು 1,05,493 ಮತದಾರರನ್ನು ಇಂದಿನಿಂದ ಅಕ್ಟೋಬರ್ 22ರ ವರೆಗೆ ನೋಟಿಸ್ ನೀಡಿ ಮತಗಟ್ಟೆ ಹಂತದಲ್ಲಿಯೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗುತ್ತದೆ. ತ್ವರಿತ ವಿಚಾರಣೆ ನಡೆಸಿ ವಿಲೇವಾರಿಗೆ ಈಗಿರುವ 9 ಜನ ಎ.ಇ.ಆರ್.ಓ.ಗಳ ಜೊತೆಗೆ ಹೆಚ್ಚುವರಿಯಾಗಿ 77 ಜನ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ನೋಟಿಸ್ ಪಡೆದ ಮತದಾರರು 01-07-1987ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಚುನಾವಣಾ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. 01-.07-1987 ರಿಂದ 02-12-2004ರ ವರೆಗೆ ಭಾರತದಲ್ಲಿ ಜನಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಮತ್ತು ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸಬೇಕು. ಅದೇ ರೀತಿ 02-12-2004ರ ನಂತರದಲ್ಲಿ ಭಾರತದಲ್ಲಿ ಜನಿಸಿದಲ್ಲಿ ಸ್ವಂತಕ್ಕೆ ಸಂಬಂಧಿಸಿದ ಜನ್ಮ ದಿನಾಂಕ ದೃಢೀಕರಿಸುವ ದಾಖಲೆ ಜೊತೆಗೆ ತಂದೆ ಮತ್ತು ತಾಯಿಗೆ ಸಂಬಂಧಿಸಿದಂತೆ ಜನ್ಮ ದಿನಾಂಕ ದೃಢೀಕರಿಸುವ ಅಥವಾ ಜನ್ಮ ಸ್ಥಳ ದೃಢೀಕರಿಸುವ ಆಯೋಗ ನಿಗದಿಪಡಿಸಿರುವ 12ರಲ್ಲಿ ಒಂದು ದಾಖಲೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದಿದ್ದಾರೆ.
ಕ್ಷೇತ್ರವಾರು ಮತದಾರರ ವಿವರ: ಕರಡು ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,05,645 ಪುರುಷ, 98,738 ಮಹಿಳೆ, ಇತರೆ 18 ಸೇರಿ 2,04,401, ಜೇವರ್ಗಿಯಲ್ಲಿ 1,10,580 ಪುರುಷ, 1,05,253 ಮಹಿಳೆ, ಇತರೆ 13 ಸೇರಿ 2,15,846, ಚಿತ್ತಾಪೂರದಲ್ಲಿ 98,756 ಪುರುಷ, 96,956 ಮಹಿಳೆ, ಇತರೆ 14 ಸೇರಿ 1,95,726, ಸೇಡಂನಲ್ಲಿ 96,875 ಪುರುಷ, 98,391 ಮಹಿಳೆ, ಇತರೆ 29 ಸೇರಿ 1,95,295, ಚಿಂಚೋಳಿಯಲ್ಲ್ಲಿ 94,574 ಪುರುಷ, 89,849 ಮಹಿಳೆ, ಇತರೆ 10 ಸೇರಿ 1,84,433, ಗುಲಬರ್ಗಾ ಗ್ರಾಮೀಣದಲ್ಲಿ 1,14,753 ಪುರುಷ, 1,06,739 ಮಹಿಳೆ, ಇತರೆ 21 ಸೇರಿ 2,21,513, ಗುಲಬರ್ಗಾ ದಕ್ಷಿಣದಲ್ಲಿ 96,481 ಪುರುಷ, 1,00,008 ಮಹಿಳೆ, ಇತರೆ 33 ಸೇರಿ 1,96,522, ಗುಲಬರ್ಗಾ ಉತ್ತರದಲ್ಲಿ 1,14,271 ಪುರುಷ, 1,15,685 ಮಹಿಳೆ, ಇತರೆ 41 ಸೇರಿ 2,29,997 ಹಾಗೂ ಆಳಂದನಲ್ಲಿ 1,08,316 ಪುರುಷ, 97,502 ಮಹಿಳೆ, ಇತರೆ 34 ಸೇರಿ 2,05,852 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಇಕ್ರಮ್ ಶರೀಫ್ ಮಾಹಿತಿ ನೀಡಿದರು.
ಮತಪಟ್ಟಿಯಲ್ಲಿ ಸೇರ್ಪಡೆಗೆ ಮುಕ್ತ ಅವಕಾಶ: ಕರಡು ಮತದಾರರ ಪಟ್ಟಿಯಿಂದ ಯಾರೇ ಅರ್ಹ ಮತದಾರರು ಹೊರಗುಳಿದಲ್ಲಿ ನಮೂನೆ-6 ಭರ್ತಿ ಮಾಡಿ ಅಗತ್ಯ ದಾಖಲಾತಿಯೊಂದಿಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರಲು ಮುಕ್ತ ಅವಕಾಶವಿದ್ದು, ಈ ಪ್ರಕ್ರಿಯೆ ನಿರಂತರವಾಗಿರಲಿದೆ. ಆನ್‍ಲೈನ್ ಮೂಲಕವು ಅರ್ಜಿ ಸಲ್ಲಿಸಬಹುದು ಎಂದಿರುವ ಜಿಲ್ಲಾ ಚುನಾವಣಾಧಿಕಾರಿಗಳು, ಇಂತಹವರ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ ಪಟ್ಟಿಯಲ್ಲಿ ಹೆಸರು ಸೇರಿಸಲು ಅಗತ್ಯ ಕ್ರಮ ವಹಿಸಲಾಗುತ್ತದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ ಇದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading