ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ task ನೀಡಿದ್ದು, ಮಾನ್ಯರ ನೇರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕಾರ್ಯ ಪ್ರವರ್ತರಾದ ಅಕ್ಕ ಪಡೆಯು ಬೀದರ ನಗರದ ಶ್ರೀ ಅರುಣೋದಯ ಪ್ರಾಥಮೀಕ & ಪ್ರೌಢ ಶಾಲಾ ಮಕ್ಕಳಿಗೆ ಅಕ್ಕ ಪಡೆಯ ಬಗ್ಗೆ ಪರಿಚಯಿಸಿ ವಿದ್ಯಾರ್ಥಿ, ವಿದ್ಯಾರ್ಥಿಯನಿರಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ, ಮಹಿಳಾ & ಮಕ್ಕಳ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ, POCSO ಮಹಿಳಾ ಸುರಕ್ಷತೆ, ಸಂಚಾರಿ ಸುರಕ್ಷತಾ ನಿಯಮಗಳ ಕುರಿತಾಗಿ ಅರಿವು ಮೂಡಿಸಿ, ಮಕ್ಕಳ ಸಹಾಯವಾಣಿ ಸಂ: 1098, ಸಹಾಯವಾಣಿ ಸಂ: 112, ಸೈಬರ್ ಅಪರಾಧ ಸಹಾಯವಾಣಿ ಸಂ: 1930 ಗಳ ಬಗ್ಗೆ, ಮಕ್ಕಳು ಮೊಬೈಲ್ ಬಳಕೆ ಮಾಡುವುದರಿಂದಾಗುವ ದುಷ್ಪರಿಣಾಮಗಳ ಬಗ್ಗೆ, ಸೇಫ್ ಟಚ್ ಅನ್ಸೆಫ ಟಚ್ ಬಗ್ಗೆ, ಯಾರೇ ಅಪರಿಚಿತ ವ್ಯಕ್ತಿ ಬಂದು ಯಾವುದೇ ರೀತಿ ಆಮಿಶ್ಯ ನೀಡಿದಲ್ಲಿ ಆಮಿಶ್ಯಕ್ಕೆ ಒಳಗಾಗದೇ ಹುಷಾರಾಗಿರುವಂತೆ ಹಾಗು 18 ವರ್ಷದ ಒಳಗಿನ ಮಕ್ಕಳು ವಾಹನ ಚಲಾವಣೆ ಮಾಡದಿರುವುದು, ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೇ ಹೆಲ್ಮೆಟ್ & ಕಾರ ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದರ ಬಗ್ಗೆ ತಮ್ಮ ಪೊಷಕರಿಗೆ ಮತ್ತು ಅಕ್ಕ ಪಕ್ಕದ ಮನೆಯವರಿಗೆ ತಿಳಿ ಹೇಳುವಂತೆ ತಿಳಿ ಹೇಳಿ ನಾವು ಸದಾ ನಿಮ್ಮ ಸುರಕ್ಷತೆಗಾಗಿ ಇದ್ದು, ನೀವು ಭಯ ಪಡುವ ಅವಶ್ಯಕತೆ ಇಲ್ಲಾ ಸದಾ ನಿಮ್ಮೊಂದಿಗೆ ಇದ್ದೆವೆಂದು ಸಕಾರಾತ್ಮಕ ಭಾವವನ್ನು ಮೂಡಿಸುವ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 24×7 ಸುರಕ್ಷತೆ ಒದಗಿಸುತ್ತಿರುವ ನಿಮ್ಮೇಲ್ಲರ ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ “ಅಕ್ಕ ಪಡೆ” ಯ ಅಧಿಕಾರಿ, ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದಿಸಲಾಗಿದೆ.
Related