ಔರಾದನ ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಫೆ.16 ರಂದು ಭಕ್ತಿಭಾವದಿಂದ ಪಾಲ್ಗೊಂಡು ನಾಡಿನೊಳಿತಿಗಾಗಿ ಪ್ರಾರ್ಥಿಸಿದರು.
ಬೆಳಿಗ್ಗೆ ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪವಿತ್ರ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತರೊಂದಿಗೆ ಸಾಗಿದರು. ಈ ವೇಳೆ ಭಕ್ತಾದಿಗಳ ಜೊತೆಗೆ ತಮಟೆ ಕಲಾವಿದರ ವಾದನಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ಅಗ್ನಿ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸುಕ್ಷೇತ್ರ ಉದ್ಭವಲಿಂಗ ಅಮರೇಶ್ವರ ದೇವಸ್ಥಾನ ಔರಾದನ ಆರಾಧ್ಯವ, ಪ್ರಾಚೀನ ಮತ್ತು ಐತಿಹಾಸಿಕ ದೇವಸ್ಥಾನವಾಗಿದ್ದು, ನಂಬಿ ಬಂದ ಭಕ್ತರ ಎಲ್ಲ ಬೇಡಿಕೆಗಳು ಇಲ್ಲಿ ಈಡೇರುತ್ತವೆ. ಎಲ್ಲ ಸಂಕಷ್ಟಗಳನ್ನು ದೂರ ಮಾಡುವ ಪುಣ್ಯ ಕ್ಷೇತ್ರ ಇದಾಗಿದ್ದು, ವರ್ಷಕ್ಕೊಮ್ಮೆ ಅತ್ಯಂತ ಅದ್ದೂರಿಯಾಗಿ ಮತ್ತು ಸಂಭ್ರಮದಿAದ ನಡೆಯುವ ಜಾತ್ರೆಗೆ ಕರ್ನಾಟಕ ಸೇರಿದಂತೆ ಪಕ್ಕದ ತರಲಂಗಾಣಾ, ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ಪುನೀತರಾಗುತ್ತಾರೆ ಎಂದರು.
ಈ ಜಾತ್ರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ನಮ್ಮ ಸಂಸ್ಕೃತಿ, ಪರಂಪರೆಯ ಭಾಗವಾಗಿದೆ. ಕ್ಷೇತ್ರದ ಎಲ್ಲ ಜನ ಒಟ್ಟಿ ಸೇರುವ ಒಗ್ಗಟ್ಟಿನ ಸಂಕೇತವೂ ಆಗಿದೆ. ಅಮರೇಶ್ವರರ ಕೃಪೆಯಿಂದ ನಮ್ಮ ಕ್ಷೇತ್ರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಅಭಿವೃದ್ಧಿ ಸದಾ ನೆಲೆಸಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ, ಸಮೃದ್ಧ ಬೆಳೆ, ಮಹಾಜನತೆಯ ಸುಖ, ಶಾಂತಿ, ನೆಮ್ಮದಿ ಹಾಗೂ ಕ್ಷೇತ್ರದ ಸಮೃದ್ಧಿಗಾಗಿ ದೇವರಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ಶಿವಾಜಿರಾವ ಪಾಟೀಲ ಮುಂಗನಾಳ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ, ಅಶೋಕ ಅಲ್ಮಾಜೆ, ಪ್ರತೀಕ ಚವ್ಹಾಣ,ಖಂಡೋಬಾ ಕಂಗಟೆ, ಸಂಜು ವಡೆಯರ್, ಸಂದೀಪ ಪಟೇಲ್, ರಾವಸಾಬ್ ಪಾಟೀಲ, ಆನಂದ ದ್ಯಾಡೆ, ಮಹಾದೇವ ಅಲ್ಮಾಜೆ, ಜಗನ್ನಾಥ ಚಿಟ್ಮೆ, ಖಂಡೇರಾವ ರಂದವೆ, ರಾಮ ನರೋಟೆ, ಬಾಬು ರಾಠೋಡ, ಧನಾಜಿ ರಾಠೋಡ, ಪ್ರಕಾಶ ಅಲ್ಮಾಜೆ, ರಮೇಶ ಗೌಡಾ ಸೇರಿದಂತೆ ಮುಖಂಡರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Discover more from ಕಲಿಯುಗದ ಕೂಗು
Subscribe to get the latest posts sent to your email.