Popular Posts

ಡಾ.ಅಂಬೇಡ್ಕರ ಕುರಿತು ಎರಡು ದಿನಗಳ ಅಂತರಾಷ್ಟಿçÃಯ ವಿಚಾರ ಸಂಕಿರಣ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ, ಫೆಬ್ರವರಿ.16 :- ಡಾ.ಬಿ.ಆರ್.ಅಂಬೇಡ್ಕರ ಅವರ ಭಾರತದ ಪ್ರಸ್ತುತ ಸವಾಲುಗಳು, ಚಿಂತನೆಗಳು ಮತ್ತು ಸಮಕಾಲಿನ ಪರಿಹಾರಗಳು ಎಂಬ ವಿಷಯದ ಕುರಿತು ಅಂತರಾಷ್ಟಿçÃಯ/ರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬೀದರ ನಗರದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಅರಣ್ಯ, ಜೀವಿಶಾಸ್ತç ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಈ ಕುರಿತು ಜಿಲ್ಲಾಡಳಿತ ಹಾಗೂ ಸಮಾಜದ ವಿವಿಧ ಹಿರಿಯ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿದರು.
ಬೀದರ ಜಿಲ್ಲೆ ರಾಜ್ಯದ ಕಿರೀಟಪ್ರಾಯ, ಬಸವ ಭೂಮಿಯಲ್ಲಿ ಡಾ.ಅಂಬೇಡ್ಕರ ಕುರಿತು ರಾಷ್ಟç, ಅಂತರಾಷ್ಟಿçÃಯ ಮಟ್ಟದ ವಿಚಾರ ಸಂಕಿರಣ, ನಾಟಕ ವಿಚಾರ ಗೋಷ್ಠಿಗಳು ನಡೆಯುತ್ತಿರುವುದು ಹೆಮ್ಮೆಯ ವಿಷಯ. ಈ ಭೂಮಿಯಿಂದ ರಾಜ್ಯ, ರಾಷ್ಟçಕ್ಕೆ ಉತ್ತಮ ಸಂದೇಶ ಸಾಗಲಿದೆಯೆಂದರು.
ಬುದ್ಧ, ಬಸವ, ಅಂಬೇಡ್ಕರ ಅವರ ಆದರ್ಶ ಚಿಂತನೆಗಳು, ಹೋರಾಟ, ಸಮಸಮಾಜ ನಿರ್ಮಾಣ, ಜಾತಿ ವರ್ಗ ಮೀರಿ ಎಲ್ಲರಿಗೂ ಅನ್ವಯವಾಗಲಿವೆ. ಡಾ.ಅಂಬೇಡ್ಕರ ಅವರ ವಿಚಾರಧಾರಗಳು ಎಲ್ಲ ಸಮುದಾಯಗಳಿಗೆ ಬೇಕಿವೆ. ಜಿಲ್ಲೆಯ ಎಲ್ಲ ವರ್ಗದ ಜನರನ್ನು, ಮುಖಂಡರನ್ನು, ಯುವ ಸಮುದಾಯಗಳನ್ನು ಒಳಗೊಳ್ಳುವಂತೆ ಯಶಸ್ವಿಯಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗುಗುವುದು ಎಂದು ತಿಳಿಸಿದರು.
ಮಾರ್ಚ ಮೊದಲ ಅಥವಾ ಎರಡನೇ ವಾರದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು. ಸ್ಥಳವನ್ನು ನಿಗದಿಪಡಿಸುವುದು, ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಸಚಿವರನ್ನು ಆಹ್ವಾನಿಸುವ ಬಗ್ಗೆ ಚರ್ಚಿಸುತ್ತೇನೆ. ವಿಚಾರ ಸಂಕಿರಣದಲ್ಲಿ ಅಂಬೇಡ್ಕರ ಅವರ ಕುರಿತಾದ ಅತ್ಯುತ್ತಮ ಕಲಾವಿದರಿಂದ ನಾಟಕಗಳನ್ನು, ಸಾಹಿತಿ ಹಾಗೂ ಹೋರಾಟಗಾರರಿಂದ ವಿವಿಧ ವಿಷಯಗಳ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗುವುದು ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ಕುರಿತು ಹೋರಾಟ ಮತ್ತು ಚಿಂತನೆವುಳ್ಳ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದ ಗಣ್ಯವ್ಯಕ್ತಿಗಳನ್ನು ಕರೆಯಲಾಗುವುದು ಎಂದು ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.
ವಿಚಾರ ಸಂಕಿರಣದಲ್ಲಿ ಆರು ಪ್ರಮುಖ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಡಾ.ಅಂಬೇಡ್ಕರ ಅವರ ಚಿಂತನೆಗಳು, ಸಮನ್ವಯತೆ ಮತ್ತು ಭವಿಷ್ಯದ ದಿಕ್ಕು, ಲಿಂಗ ಸಮಾನತೆ, ಅಸ್ಪೃಶ್ಯತೆಯ ಸಬಲೀಕರಣದ ವಿವಿಧ ಆಯಾಮಗಳು, ಭಾರತದ ಸಂವಿಧಾನದ ಪರಂಪರೆ, ಆಶಯ ಮತ್ತು ಮೌಲ್ಯಗಳು, ಭಾರತದ ಆರ್ಥಿಕ, ಸಾಮಾಜಿಕ ನ್ಯಾಯ ಮತ್ತು ಧಾರ್ಮಿಕ ಹಕ್ಕುಗಳು, ಬುದ್ಧ, ಬಸವ, ಅಂಬೇಡ್ಕರ ಮತ್ತು ಇತರೆ ದಾರ್ಶನಿಕ ತತ್ವ ಸಿದ್ಧಾಂತಗಳ ಪ್ರಸ್ತುತ ಅಳವಡಿಕೆ, ಭಾರತದ ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಸವಾಲುಗಳು, ಮುಂತಾದ ವಿಷಯಗಳ ಮೇಲೆ ಗೋಷ್ಠಿಗಳುನಡೆಯಲಿವೆ.
ಸಭೆಯಲ್ಲಿ ಸಮಾಜದ ಹಿರಿಯ ಮುಖಂಡರುಗಳು ವಿಚಾರ ಸಂಕಿರಣದ ಯಶಸ್ವಿಗಾಗಿ ವಿವಿಧ ಸಲಹೆಗಳನ್ನು ನೀಡಿದರು. ಎಲ್ಲರ ಸಲಹೆಗಳನ್ನು ಪರಿಶೀಲಿಸಿ ಜಿಲ್ಲಾಡಳಿತ ಹಾಗೂ ಸಮಾಜದ ಎಲ್ಲ ಮುಖಂಡರುಗಳು ಸಹಕಾರದಿಂದ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ಸಚಿವ ಖಂಡ್ರೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ, ಬೀದರ ಮಹಾನಗರ ಪಾಲಿಕೆಯ ಆಯುಕ್ತರಾದ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಬಿ.ಕರಾಳೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಯೋಗೇಶ, ಸೇರಿದಂತೆ ಸಮಾಜದ ಮುಖಂಡರುಗಳು ಉಪಸ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!