Popular Posts

ಒಳ ಮೀಸಲಾತಿ 6:6:5 ಅನುಪಾತದಲ್ಲಿ ಜಾರಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಬೀದರ್,  ಒಳ ಮೀಸಲಾತಿಯನ್ನು ಶೇಕಡಾ 6:6:5 ಅನುಪಾತದಂತೆ ಸಂಪೂರ್ಣ ಜಾರಿಗೊಳಿಸಲು ಆಗ್ರಹಿಸಿ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಹಾಗೂ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕವು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡಿದ ಸರ್ಕಾರದ ಹಿಂದಿನ ಕ್ರಮವನ್ನು ಸ್ವಾಗತಿಸಿದರೂ, ಅದನ್ನು ಎಲ್ಲಾ ಕ್ಷೇತ್ರಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪಿನ ಆಶಯದಂತೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ಜಾರಿಯಾಗಬೇಕು ಎಂದು ಸಮಿತಿ ತಿಳಿಸಿದೆ. ರಾಜ್ಯ ಸರ್ಕಾರ ಸ್ಪಷ್ಟ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವಕಾಶ ವಂಚಿತ ಸಮುದಾಯಗಳು ಮತ್ತೊಂದು ಹಂತದ ಹೋರಾಟಕ್ಕೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.

ಸಮಿತಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಕೆ.ಜಿ.ದಿಂದ ಪಿ.ಹೆಚ್.ಡಿ.ವರೆಗೆ ಶಿಕ್ಷಣದಲ್ಲಿ 6:6:5 ಅನುಪಾತದಲ್ಲಿ ಮೀಸಲಾತಿ, ಉದ್ಯೋಗದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿಗಳಲ್ಲಿ ಒಳ ಮೀಸಲಾತಿ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾತಿನಿಧ್ಯ, SಅSP/ಖಿSP ಯೋಜನೆಗಳ ಹಂಚಿಕೆ ಸೇರಿದಂತೆ ಶಾಶ್ವತ ಆಯೋಗ ರಚನೆಗೆ ಆಗ್ರಹಿಸಿದೆ.

ಇದಲ್ಲದೆ ಒಳ ಮೀಸಲಾತಿ ಪಡೆಯುವಲ್ಲಿ ನಡೆಯುವ ಮೋಸ ತಡೆಯಲು ಜಾತಿ ಪ್ರಮಾಣಪತ್ರಗಳನ್ನು ಸರಿಯಾದ ಉಪಜಾತಿ ವಿವರಗಳೊಂದಿಗೆ ನೀಡಬೇಕು ಹಾಗೂ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ  ಆದಿ ಜಾಂಬವ ಸಂಘದ ರಾಜ್ಯ ಉಪಾಧ್ಯಕ್ಷ ರಾಜು ಕಡ್ಯಾಳ, ಮಾದಿಗ ದಂಡೋರಾ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಫರ್ನಾಡಿಸ್ ಹಿಪ್ಪಳಗಾಂವ, ಸಂಜೀವ ಬೇಂದ್ರೆ, ಸ್ವಾಮಿದಾಸ ಕೆಂಪೆನೂರ, ಕಮಲಾಕರ ಹೆಗಡೆ, ಜಾಫೆಟ್ ಕಡ್ಯಾಳ, ಚನ್ನಯ್ಯಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ ವಿಜಯಕುಮಾರ ಹಿಪ್ಪಳಗಾಂವ, ವಿಜಯಕುಮಾರ ನಾತೆ, ಕಮಲಾಕರ ಹೆಗಡೆ, ಹಣಮಂತ ಸೂರ್ಯವಂಶಿ, ಸೂರ್ಯಕಾಂತ ದಂಡಿನ, ದೇವಿದಾಸ ತುಮಕುಂಟೆ, ಜೀವನ ರಿಕ್ಕೆ, ವಿಲ್ಸನ್ ಚಿದ್ರಿ, ಪೀಟರ ಶ್ರೀಮಂಡಲ, ದತ್ತು ಭೇಂಡೆ, ತುಳಸಿರಾಮ ಜಾಕತೆ, ಸುಂದರರಾಜ ಮುದ್ದಾಳೆ, ಸುನಿಲ ಕೋಟಿ, ಶುಭಾಷ ವರ್ಮಾ, ಮಾರುತಿ ಸೂರ್ಯವಂಶಿ, ಅಂಬದಾಸ ಹುಲ್ಸುರೆ, ಶಿವಕುಮಾರ್ ಪೋತೆ, ದಯಾ ಕಡ್ಯಾಳ, ರಾಜು ಕಾಣೆ, ಬಲಭಿಮ ಹುಲಿಮನಿ, ದಯಾನಂದ ಕುಶನೊರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading