Popular Posts

ಮಾರ್ಚ 1 ಕ್ಕೆ ಜಿಲ್ಲಾ ಕೇಂದ್ರ ಕಛೇರಿ ಉದ್ಘಾಟನೆ, ಕನ್ನಡ ಶಾಲೆ ಉಳಿಸಿ, ಕನ್ನಡ ಭಾಷೆ ಬೆಳಸಿ, ವಿಚಾರ ಸಂಕಿರಣ.

ಬೀದರ ನಗರದ ಕಮಠಾಣೆ ಶಾಲೆ ಪಕ್ಕದ ಹಲವಾಯಿ ಕಾಂಪ್ಲೇಕ್ಸನಲ್ಲಿ ವೀರ ಕನ್ನಡಿಗರ ಸೇನೆ  ಪದಾಧಿಕಾರಿಗಳು ಸಭೆ ಭಾನುವಾರ ಮಧ್ಯಾಹ್ನ 3 ಗಂಟೆಗೆ ಜರುಗಿತು. ಸ್ವಾಗತ ಪ್ರಾಸ್ತಾವಿಕ ಮಾತುಗಳು ವೀರ ಕನ್ನಡಿಗರ ಸೇನೆ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಗೊವಿಂದ ಬಡಿಗೇರ ಮಾತನಾಡಿ ಸಂಘಟನೆ ಒಬ್ಬರಿಂದ ನಡೆಸುದಲ್ಲ ಸಂಘಟನೆಗೆ ಕಾರ್ಯಕರ್ತರೆ ಶಕ್ತಿ. ಯಾವುದೇ ಕಾರಣಕ್ಕೂ ಕಾರ್ಯಕರ್ತರ ಶಕ್ತಿಯನ್ನು ನಿರ್ಲಕ್ಷ ಮಾಡಿದ್ದಾಗ, ಸಂಘಟನೆ ಬಲಹಿನವಾಗುತ್ತದೆ. ಸಂಘಟನೆ ಕಟ್ಟಿಬೆಳೆಸುವ ಕಾರ್ಯಕರ್ತರ ಸಮಸ್ಯೆ ಸವಾಲುಗಳಿಗೆ ಸ್ವಂಧನೆ ಮಾಡಬೇಕು. ಸಂಘಟನೆಗೆ ನಾವು ಬೆಳೆಸಿದರೆ, ನಮ್ಮಗೆ ಸಂಘಟನೆ ಬೆಳಸುತ್ತದೆ. ಜಿಲ್ಲಾಧ್ಯಕ್ಷ ಅಮರ ಪೂಜಾರಿ ಮಾರ್ಚ 1 ರಂದು ಭಾನುವಾರ, ಜಿಲ್ಲಾ ಕೇಂದ್ರ ಕಛೇರಿ ಉದ್ಘಾಟನೆ ಕನ್ನಡ ಶಾಲೆಗಳು ಉಳಿಸಿ ಕನ್ನಡ ಭಾಷೆ ಬೆಳಸಿ, ವಿಚಾರ ಸಂಕಿರಣ, ಸಫಾಯಿ ಕರ್ಮಚಾರಿಗಳಿU,ೆ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡುವ ನಿರ್ಧಾವನ್ನು ಕೈಗೊಂಡಾಗ ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಸವರಾಜ ಜಡುಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಾಬುರಾವ ಕೆ ಬಿಟ್ಟೆ ಸಂಘಟನ ಕಾರ್ಯದರ್ಶಿ ಶಶಿಧರ ಜ್ಯೋತಿ, ಬೀದರ ದಕ್ಷಿಣ ತಾಲ್ಲೂಕ ಅಧ್ಯಕ್ಷ ಗೌಸೋದ್ಧೀನ ಯಾಕತಪೂರು, ಜಿಲ್ಲಾ ಖಜಾಂಚಿ ಕಲ್ಲಪ್ಪ ಚಾಂಬೋಳಕರ್, ಅಲ್ಪಸಂಖ್ಯಾತರ ತಾಲ್ಲೂಕ ಘಟಕದ ಪ್ರಧಾನ ಕಾರ್ಯದರ್ಶಿ ಜುಬೇರ ಪಾಶ,  ಕಾರ್ಯಕರ್ತರಾದ ಭೀಮರಾವ ಬಡಿಗೇರ, ಪ್ರಶಾಂತ ಹೂವುಗಾರ, ರವಿ ಭಾವಿಕಟ್ಟಿ, ರಾಹುಲ ಸಿಂಧೆ, ಮಹೇಶ ಮಡಿವಾಳ, ಒಪ್ಪಿಗೆಯನ್ನು ಸೂಚಿಸಿದರು. ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ, ಸುಬ್ಬಣ್ಣ ಕರಕನಳ್ಳಿ ಅಧ್ಯಕ್ಷತೆ ವಹಿಸಿ, ಮಾತನಾಡಿ ಜನಸಾಮಾನ್ಯರ ನ್ಯಾಯದ ಧ್ವನಿಯಾಗಿ ಅನ್ಯಾದ ವಿರುದ್ಧ ಹೋರಾಟದ ಶಕ್ತಿಯಾಗಿ ಸಂಘಟನೆ ಮೂಲಕ ಕೆಲಸ ಮಾಡಬೇಕು. ಸಂಘಟನೆ ಮೂಲಕ ಸಮಾಜ ಸೇವೆ ಮಾಡುವವರಿಗೆ ವೀರ ಕನ್ನಡಿಗರ ಸೇನೆ ಶಕ್ತಿಯಾಗಿ ನಿಲ್ಲುತ್ತದೆ. ಆಯೋಜನೆ ಮಾಡಿರುವ ಕಾರ್ಯಕ್ರಮಕ್ಕೆ ರಾಜ್ಯ ಗೌರವ ಅಧ್ಯಕ್ಷರಾದ ಜಗನ್ನಾತ ಸೂರ್ಯವಂಶಿ, ರಾಜ್ಯಾಧ್ಯಕ್ಷ ಅಮೃತ ಪಾಟೀಲ್, ರಾಜ್ಯ ಉಪಾಧ್ಯಕ್ಷ ರವಿ ವಂಟೆ, ವಿಭಾಗಿ ಅಧ್ಯಕ್ಷ ವಿಠ್ಠಲ್ ಕುಸಾಳೆ ಮುಂತಾದವರು ಭಾಗವಹಿಸುವ ಕಾರ್ಯಕ್ರಮದಲ್ಲಿ ಸ್ಥಳಿಯ ಗಣ್ಯವ್ಯಕ್ತಿಗಳು, ವಿಷಯ ಚಿಂತಕರು ಭಾಗವಹಿಸಿ ವಿಷಯ ಮಂಡನೆ ಮಾಡುತ್ತಾರೆ. ಜಿಲ್ಲೆಯ ಎಲ್ಲಾ ಎಂಟು ತಾಲ್ಲೂಕಿನಲ್ಲಿ  ಮಹಾನತ ಪಾಲಿಕೆಗೆ ನಗರ ಸಭೆಗಳಿಗೆ ಪುರಡಭೆಗಳಿಗೆ ಪಟ್ಟಣ ಪಂಚಾಯತಗಳಿಗೆ ಸಂಘಟನೆಯ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗುದು ಅಂದು ನಡೆಯಲ್ಲಿರುವ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮಾಧ್ಯವiದ ಮೂಲಕ ವಿನಂತಿ ಮಾಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!