1
1

ಬೀದರ್ ನ ರೋಟರಿ ಕ್ಲಬ್ ಆಫ್ ಸಿಲ್ವರ್ ಸ್ಟಾರ್, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿವಿ ಭೂಮರೆಡ್ಡಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ಮತ್ತು ಬೀದರ್ ನ ಗುದಗೆ ಆಸ್ಪತ್ರೆಯ ಸಹಯೋಗದಲ್ಲಿ ಇಂದು ಬೀದರ್ ನಗರದ ಬಿವಿ ಭೂಮಿ ರೆಡ್ಡಿ ಕಾಲೇಜಿನ ಅವಣದಲ್ಲಿ ಉಚಿತವಾಗಿ ಮಲ್ಟಿ ಸ್ಪೆಶಾಲಿಟಿ ಆರೋಗ್ಯ ತಪಾಸಣಾ ಶಿಬಿರವನ್ನ ಹಮ್ಮಿಕೊಳ್ಳಲಾಯಿತು.
ಸುಮಾರು 500ಕ್ಕೂ ಅಧಿಕ ಜನರು ಶಿಬಿರದಲ್ಲಿ ಭಾಗಿಯಾಗಿದ್ದು, ಬಂದಂತಹ ಸಾರ್ವಜನಿಕರಿಗೆ ಉಚಿತವಾಗಿ ಬಿಪಿ ತಪಾಸಣೆ, ಶುಗರ್ ತಪಾಸಣೆ, ಕಣ್ಣಿನ ತಪಾಸಣೆ ಮಂಡಿ ಹಾಗೂ ಕೈ ಕಾಲು ತಪಾಸಣೆ, ದಂತ ತಪಾಸಣೆಯನ್ನ ಆಯಾ ವಿಭಾಗದ ಪರಿಣಿತ ವೈದ್ಯರು ನಡೆಸಿದರು.
ಇದೇ ವೇಳೆ ರೋಟರಿ ಸಿಲ್ವರ್ ಸ್ಟಾರ್ ಅಧ್ಯಕ್ಷ ಆದಿಶ್ ವಾಲಿ ಮಾತನಾಡಿ, 6ಕ್ಕೂ ಅಧಿಕ ನುರಿತ ತಜ್ಞ ವೈದ್ಯರ ತಂಡದೊಂದಿಗೆ ಇಂದು ಭೂಮರೆಡ್ಡಿ ಕಾಲೇಜಿನಲ್ಲಿ ವಿವಿಧ ಆರೋಗ್ಯ ತಪಾಸಣಾ ಶಿಬಿರವನ್ನ ಹಮ್ಮಿಕೊಳ್ಳಲಾಗಿದ್ದು, ಬೀದರ್ ನಗರ ಹಾಗೂ ಗ್ರಾಮಾಂತರ ಪ್ರದೇಶದ ಜನರು ಬಂದು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಗುದಗೆ ಆಸ್ಪತ್ರೆಯ ವೈದ್ಯ ಸಚಿನ ಗುದಗೆ ಮಾತನಾಡಿ, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ, ರೋಟರಿ ಸಿಲ್ವರ್ ಸ್ಟಾರ್ ಹಾಗೂ ನಮ್ಮ ಗುದಗೆ ಆಸ್ಪತ್ರೆಯ ಸಹಯೋಗದಲ್ಲಿ ಸಾರ್ವಜನಿಕರ ಆರೋಗ್ಯಕ್ಕಾಗಿ ಉಚಿತ ಬಹು ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಸಾಕಷ್ಟು ಜನ ಬಂದು ತಮ್ಮ ಕಣ್ಣು, ಹಲ್ಲು , ಮೈ ಕೈ ನೋವು, ಮಂಡಿ ನೋವುವಿನ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ತಪಾಸಣೆ ಮಾಡಿಸಿಕೊಂಡ ಸಾರ್ವಜನಿಕರಿಗೆ ಮೆಡಿಸಿನ್ ಗಳನ್ನು ಸಹ ನೀಡಲಾಗುತ್ತಿದೆ ಎಂದರು.
ಈ ಸಂಧರ್ಭದಲ್ಲಿ ವೈದ್ಯರಾದ ಡಾ. ನಿತಿನ್ ಸಿ ಗುದಗೆ, ಡಾ.ವೈಭವ್ ಭದಭದೇ, ಡಾ. ಶೈಲೇಶ್ ಮಠ್, ಡಾ.ಗೋವಿಂದರಾಜ, ಡಾ. ಸಂಗಮೇಶ್ ವಡಗಾವೆ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿದರು.
ಸಿಲ್ವರ್ ಸ್ಟಾರ್ ಕ್ಲಬ್ ನ ಉಪಾಧ್ಯಕ್ಷ ಆನಂದ ಕೋಟಾರ್ಕಿ, ಕಾರ್ಯದರ್ಶಿ ಕಿರಣ್ ಸ್ಯಾಮ್ಯುಯೆಲ್, ನಿರ್ದೇಶಕರಾದ ಸಹನಾ ಪಾಟೀಲ್, ಮನೀಶ್ ಸಿಂಧೋಲ, ಭೂಮರೆಡ್ಡಿ ಕಾಲೇಜಿನ ಪ್ರಾಂಶುಪಾಲರಾದ ಡಾ.ದೀಪಾ ರಾಗ ಹಾಗೂ ಭೂಮರೆಡ್ಡಿ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
Subscribe to get the latest posts sent to your email.