Popular Posts

ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಸೂಚನೆ-ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ

ಬೀದರ, ಫೆಬ್ರವರಿ.20 :- ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಬರುವ ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯಡಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಒಂದೇ ಸೂರಿನಡಿ ವೈದ್ಯಕಿಯ, ಕಾನೂನು, ಪೋಲಿಸ್ ಹಾಗೂ ಸಮಾಲೋಚನೆ ನೇರವು ಒದಗಿಸುವ ಮುಖ್ಯ ಉದ್ದೇಶದಿಂದ ಕೇಂದ್ರ ಸರಕಾರವು “ಸಖಿ” ಒನ್ ಸ್ಟಾಪ್ ಸೆಂಟರ್‌ನ್ನು 2015-2016ನೇ ಸಾಲಿನಲ್ಲಿ ಜಾರಿಗೊಳಿಸಲಾಗಿರುತ್ತದೆ ಎಂದರು.
ರಾಜ್ಯ ಸರಕಾರದ ಆದೇಶದ ಮೇರೆಗೆ ಬೀದರ ಜಿಲ್ಲೆಯಲ್ಲಿ “ಸಖಿ” ಒನ್ ಸ್ಟಾಪ್ ಕೇಂದ್ರವು ಬ್ರಿಮ್ಸ್ ಜಿಲ್ಲಾ ಆಸ್ಪತ್ರೆ, ಬೀದರ ಕಟ್ಟಡದಲ್ಲಿ 2019-20ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗಿರುತ್ತಿದೆ. ಸದರಿ ಯೋಜನೆಯಡಿ ಮಹಿಳೆಯರ/ಮಕ್ಕಳ ದೈಹಿಕ, ಲೈಂಗಿಕ, ಭಾವನಾತ್ಮಕ. ಮಾನಸಿಕ ಮತ್ತು ಆರ್ಥಿಕ ಕಿರುಕುಳವನ್ನು ಖಾಸಗಿ ಮತ್ತು ಸಾರ್ವಜನಿಕ, ಕುಟುಂಬ, ಸಮುದಾಯ ಮತ್ತು ಕೆಲಸದ ಸ್ಥಳಗಳಲ್ಲಿ ಜಾತಿ, ವರ್ಗ, ಶಿಕ್ಷಣ ಸ್ಥಿತಿ, ವೈವಾಹಿಕ ಸ್ಥಿತಿಯನ್ನು ಪರಿಗಣಿಸಿ, ಹಿಂಸಾಚಾರದಿAದ ಬಳಲುತ್ತಿರುವವರನ್ನು ಬೆಂಬಲಿಸುವುದು ಉದ್ದೇಶವಾಗಿರುತ್ತದೆಂದರು.
ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯಲ್ಲಿ ಸಿಬ್ಬಂದಿಯವರು 24×7 ರಂತೆ ಕಾರ್ಯನಿರ್ವಹಿಸುತ್ತಿದ್ದು, ಸದರಿ ಕೇಂದ್ರಕ್ಕೆ ನೊಂದು ಬಂದಿರುವ ಹೆಣ್ಣುಮಕ್ಕಳ/ಮಹಿಳೆಯರಿಗೆ ಉಚಿತವಾಗಿ ತರ್ತು ಸಂದರ್ಭದಲ್ಲಿ ವಾಹನದ ವ್ಯವಸ್ಥೆ, 05 ದಿನಗಳವರೆಗೆ ತಾತ್ಕಾಲಿಕ ಆಶ್ರಯ ಮತ್ತು ಇತರೇ ವ್ಯವಸ್ಥೆಗಳನ್ನು ಒದಗಿಸಿಕೊಡಲಾಗುತ್ತಿದೆ. ವಿವಿಧ ಸಮಸ್ಯೆಗಳಿಗೆ ಒಳಗಾಗಿರುವ ಮಹಿಳೆಯರು/ಮಕ್ಕಳು ಸದರಿ ಯೋಜನೆಯ ಸೌಲಭ್ಯವನ್ನು ಪಡೆಯಲು ಸಖಿ ಒನ್ ಸ್ಟಾಪ್ ಸೆಂಟರ್, ಬ್ರಿಮ್ಸ್ ಜಿಲ್ಲಾ ಆಸ್ಪತ್ರೆ, ಬೀದರಗೆ ಸಂಪರ್ಕಿಸುವುದು ಹಾಗೂ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಮತ್ತು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಲೂರು ಬೀದರ ಇವರನ್ನು ಸಹ ಸಂಪರ್ಕಿಸಬಹುದಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಮಾತನಾಡಿ, ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಯ ವಾಹನದ ಸೌಲಭ್ಯವನ್ನು ಪಡೆಯಲು 181 ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಲು ತಿಳಿಸಿದರು. ಹಾಗೂ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಘಟಕ ಆಡಳಿತಾಧಿಕಾರಿ ಸಂಗೀತಾ ಮೊ.ನಂ. 6360863083, ಆಪ್ತ ಸಮಾಲೋಚಕರಾದ ಅಂಬಿಕಾ ಮೊ.ನಂ.7795833267 ಇವರಿಗೆ ದೂರವಾಣಿ ಮೂಲಕ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Discover more from ಕಲಿಯುಗದ ಕೂಗು

Subscribe to get the latest posts sent to your email.

Leave a Reply

Your email address will not be published. Required fields are marked *

error: Content is protected !!

Discover more from ಕಲಿಯುಗದ ಕೂಗು

Subscribe now to keep reading and get access to the full archive.

Continue reading