Popular Posts

50 ಜರಿ ಜರ್ದೋಸಿ ಮಹಿಳಾ ಕುಶಲಕರ್ಮಿಗಳಿಗೆ ಸುಧಾರಿತ ಟೂಲ್‌ಕಿಟ್ ವಿತರಣೆ

ಬೀದರ್:ನಗರದ ಸಹಯೋಗ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ, ಭಾರತ ಸರ್ಕಾರದ ವಸ್ತ್ರ ಮಂತ್ರಾಲಯದ ಅಭಿವೃದ್ಧಿ ಆಯುಕ್ತರ (ಹಸ್ತಶಿಲ್ಪ) ಕಛೇರಿಯ ಎನ್.ಹೆಚ್.ಡಿ.ಪಿ. (ಓಊಆP) ಯೋಜನೆಯಡಿ, 50 ಜರಿ ಜರ್ದೋಸಿ ಮಹಿಳಾ ಕುಶಲಕರ್ಮಿಗಳಿಗೆ ಸುಧಾರಿತ ಟೂಲ್‌ಕಿಟ್ ವಿತರಣಾ ಕಾರ್ಯಕ್ರಮವನ್ನು ನಗರದ ಎಕ್ಸಲೆಂಟ್ ಡಿಗ್ರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಕಛೇರಿಯ ಉಪ ವ್ಯವಸ್ಥಾಪಕರಾದ ಶ್ರೀ ಸುಮೀತ್‌ಕುಮಾರ್, “ಮಹಿಳಾ ಕುಶಲಕರ್ಮಿಗಳು ಸುಧಾರಿತ ಟೂಲ್‌ಕಿಟ್‌ಗಳನ್ನು ಬಳಸಿಕೊಂಡು ಹೊಸ ವಿನ್ಯಾಸದ ವಸ್ತುಗಳನ್ನು ತಯಾರಿಸಲು ಮುಂದಾಗಬೇಕು. ಮಹಿಳೆಯರು ಸ್ವ-ಸಹಾಯ ಗುಂಪುಗಳನ್ನು ರಚಿಸಿಕೊಂಡರೆ ಬ್ಯಾಂಕ್‌ಗಳಿAದ ಮುದ್ರಾ ಯೋಜನೆಯಡಿ ಸುಲಭವಾಗಿ ಸಾಲ ಸೌಲಭ್ಯ ಪಡೆದು ಸ್ವಂತ ಉದ್ದಿಮೆ ಪ್ರಾರಂಭಿಸಬಹುದು,” ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಕರಕುಶಲ ಅಭಿವೃದ್ಧಿ ಅಧಿಕಾರಿ ಶ್ರೀ ಸುಶಾಂತ್ ಭುವೇನ್, ಕೇಂದ್ರ ಸರ್ಕಾರದ ವಸ್ತ್ರ ಮಂತ್ರಾಲಯದಿAದ ಕುಶಲಕರ್ಮಿಗಳಿಗೆ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೋರ್ವ ಅತಿಥಿ, ಸಹಾರ್ದ ಸಂಸ್ಥೆಯ ನಿರ್ದೇಶಕ ಶ್ರೀ ಸುಬ್ರಮಣ್ಯಂ ಪ್ರಭು, “ತರಬೇತಿ ಪಡೆದ ಕುಶಲಕರ್ಮಿಗಳು ತಯಾರಿಸಿದ ವಸ್ತುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ತಮ್ಮ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಳ್ಳಬಹುದು,” ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಯೋಗ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಎಂ.ಡಿ. ಶಫಿಯೋದ್ದಿನ್, “ನಮ್ಮ ಸಂಸ್ಥೆಯು ಕಳೆದ 15 ವರ್ಷಗಳಿಂದ ಜರಿ ಜರ್ದೋಸಿ ಕುಶಲಕರ್ಮಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇಂದು ಆಯ್ಕೆಯಾದ 50 ಮಹಿಳೆಯರಿಗೆ ಅತ್ಯಾಧುನಿಕ ಟೂಲ್‌ಕಿಟ್ ನೀಡುವ ಮೂಲಕ ಅವರ ಕಾಯಕಕ್ಕೆ ಬಲ ತುಂಬಲಾಗುತ್ತಿದೆ,” ಎಂದರು.

ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಂ.ಡಿ. ರಿಜ್ವಾನ್ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಆಯ್ದ 50 ಕುಶಲಕರ್ಮಿಗಳಿಗೆ ಗಣ್ಯರ ಹಸ್ತದಿಂದ ಟೂಲ್‌ಕಿಟ್ ಸೆಟ್‌ಗಳನ್ನು ವಿತರಿಸಲಾಯಿತು. ಶ್ರೀ ಎಂ.ಎ. ಸಮಿ ಅವರು ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!