Popular Posts

ಜನವಾಡಾ ಪೊಲೀಸರಿಂದ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಾರ್ಕೋಟಿಕ್ ಮಾದಕ ದ್ರವ್ಯ ವಶ

ಬೀದರ್ ಜಿಲ್ಲಾ ಪೊಲೀಸ್, ಜನವಾಡಾ ಪೊಲೀಸರಿಂದ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಾರ್ಕೋಟಿಕ್ ಮಾದಕ ದ್ರವ್ಯ ಅಂಶವುಳ್ಳ ಗುಳಿಗೆಗಳು, ಸಿರಪ್ ಬಾಟಲಗಳು, ನಾಲ್ಕು ದ್ವಿಚಕ್ರ ವಾಹನಗಳ ವಶ
ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ರವರ ನಿರ್ದೇಶನ ಮತ್ತು ನೇರ ಮಾರ್ಗದರ್ಶನದಂತೆ, ಜನವಾಡಾ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಕನಳ್ಳಿ-ಮರಖಲ್ ರಸ್ತೆಯ ಮುಖಾಂತರ ಐದು ಜನ ಆರೋಪಿತರು ನಾಲ್ಕು ದ್ವಿಚಕ್ರ ವಾಹನಗಳ ಮೇಲೆ ಮಾದಕ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವ ಮಾಹಿತಿಯಂತೆ, ಶ್ರೀ ಚಂದ್ರಕಾಂತ ಪೂಜಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೀದರ ರವರ ಮುಂದಾಳತ್ವದಲ್ಲಿ ಶ್ರೀ ದೂದಪೀರ್ ಹುಸೇನ್ ಸಾಬ್ ಮುಲ್ಲಾ, ಪೊಲೀಸ್ ಉಪಾಧೀಕ್ಷಕರು ಬೀದರ ಶ್ರೀ ಜಿ.ಎಸ್. ಬಿರಾದರ, ಸಿಪಿಐ ಬೀದರ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ಜನವಾಡಾ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಬಾಷುಮಿಯಾ ಹಾಗೂ ಅಧಿಕಾರಿ, ಸಿಬ್ಬಂದಿ ರವರಾದ ಶ್ರೀ ವಿಜಯಕುಮಾರ, ಎ.ಎಸ್‌.ಐ, ಶ್ರೀ ವಿಷ್ಣುರೆಡ್ಡಿ, ಶ್ರೀ ವಿಜಯಕುಮಾರ, ಶ್ರೀ ಶಿವಕುಮಾರ, ಶ್ರೀ ಬಾಬುಶೆಟ್ಟಿ ಮತ್ತು ಶ್ರೀ ಅನೀಲ್ ರವರನ್ನೊಳಗೊಂಡ ತಂಡವು ದಾಳಿ ಮಾಡಿ 1) Senkof 100ml ಸಿರಪ ಬಾಟಲಗಳು 2] Eskuf 100 ml ಸಿರಪ ಬಾಟಲಗಳು 3] Pyeevon Spas Plus ಗುಳಿಗೆಗಳು, 4] Pyeevon Spas Plus ಹೆಸರಿನ ಗುಳಿಗೆಗಳು, ಮತ್ತು 5] Nitracare ಹೆಸರಿನ ಟ್ಯಾಬಲೇಟಗಳು ಹೀಗೆ ಒಟ್ಟು ಅಂದಾಜು ಮೌಲ್ಯ 90,116=00 ರೂಪಾಯಿಗಳು, ಬೆಲೆಯುಳ್ಳ ಸಿರಪ್, ಟ್ಯಾಬಲೇಟಗಳು ಮತ್ತು ಆರೋಪಿತರು ಸಾಗಿಸಲು ಬಳಸಿದ ನಾಲ್ಕು ಮೋಟಾರ ಸೈಕಲಗಳು ಅ.ಕಿ. 2,05,000=00 ರೂಪಾಯಿ ಹಾಗು ಆರೋಪಿತರಿಂದ ನಗದು ಹಣ 10,100=00 ಸಾವಿರ ರೂಪಾಯಿ ಹೀಗೆ ಒಟ್ಟು 3,05,216=00 ರೂಪಾಯಿ ಬೆಲೆ ಬಾಳುವುದನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಕಾನೂನು ರಿತ್ಯ ಕ್ರಮ ಕೈಕೊಳ್ಳಲಾಗಿದೆ.
ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸುತ್ತಿದ್ದ ಜಿಲ್ಲೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.ಬೀದರ ಜಿಲ್ಲೆಯಲ್ಲಿ ನಶೆ ಯಿಂದ ಸಮಾಜ ಹಾಳು ಮಾಡುವವರಿಗೆ ತಕ್ಕ ಶಿಕ್ಷೆ ಕೊಡಿಸುವಲ್ಲಿ, ಜಿಲ್ಲೆಯನ್ನು ನಶಾ ಮುಕ್ತ ಜಿಲ್ಲೆಯನ್ನಾಗಿಸಲು, ಅಪರಾಧಗಳ ನಿಯಂತ್ರಣಕ್ಕಾಗಿ ಬೀದರ ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ.ಪ್ರದೀಪ್ ಗುಂಟಿ, ಐ.ಪಿ.ಎಸ್.,ಪೊಲೀಸ್ ವರೀಷ್ಠಾಧಿಕಾರಿಗಳು.

Leave a Reply

Your email address will not be published. Required fields are marked *

error: Content is protected !!